ಶ್ರೀ ಮಹಾಲಕ್ಷ್ಮಿಯ ಕಥೆ
ಒಬ್ಬ ವೃದ್ಧ ಬ್ರಾಹ್ಮಣನು ನಿತ್ಯವೂ ಅರಳಿ ಮರಕ್ಕೆ ನೀರು ಹಾಕಿ, ಪ್ರೋಕ್ಷಣಿಸುತ್ತಾ ಶುದ್ಧ ಮನಸ್ಸಿನಿಂದ ಪೂಜೆ ಪುನಸ್ಕಾರ ಮಾಡುತ್ತಿದ್ದನು. ಅದೇ ಸಮಯಕ್ಕೆ ನಿತ್ಯವೂ ಒಬ್ಬ ಹುಡುಗಿಯು ಆ ಅರಳಿ ಮರದಿಂದ ಹೊರ ಬಂದು ಆ ವೃದ್ಧನಿಗೆ ಹೇಳುತ್ತಿದ್ದಳು "- ಅಪ್ಪಾಜಿ ನಾನು ನಿಮ್ಮ ಜೊತೆ ಬರುತ್ತೇನೆ..!" ಅವಳ ಈ ಮಾತನ್ನು ಕೇಳಿ ಕೇಳಿ ಆ ವೃದ್ಧನು ನಿಶಕ್ತನಾಗುತ್ತ ಹೊರಟಿದ್ದ. ಇದನ್ನೆಲ್ಲಾ ನೋಡಿ ಆವೃದ್ದನ ಹೆಂಡತಿ ವೃದ್ದೆಯು
"- ಏನಾಯ್ತು, ಏನು ಮಾತು..!? ಯಾಕೋ ಬಹಳ ನಿಶಕ್ತರಾಗುತ್ತಿರುವಿರಿ...!"
ಆದರೆ ವೃದ್ಧನು ಹೇಳಿದ..
"- ನಾನು ನಿತ್ಯ ಅರಳಿ ಮರವನ್ನು ಪೂಜೆ ಮಾಡುವಾಗ ಅದರೊಳಗಿಂದ ಒಬ್ಬ ಹುಡುಗಿ ಹೊರ ಬರುತ್ತಾಳೆ. ಅವಳು'- ಅಪ್ಪಾಜಿ ನಾನು ನಿಮ್ಮೊಂದಿಗೆ ಬರುತ್ತೇನೆ ಎನ್ನುತ್ತಾಳೆ'
ಆಗ ವೃದ್ದೆಯು ಹೇಳಿದಳು -
"ಸರಿ.., ನಾಳೆ ಅವಳನ್ನು ಕರೆದು ತನ್ನಿ. ಈಗಾಗಲೇ ನಮ್ಮೊಂದಿಗೆ ಆರು ಹುಡುಗಿಯರು ಇದ್ದಾರೆ. ಏಳನೆಯವಳಾಗಿ ಇವಳು ಇರುತ್ತಾಳೆ..!"
ಮರು ದಿವಸ ವೃದ್ಧನು ಆ ಹುಡುಗಿಯನ್ನು ಮನೆಗೆ ಕರೆತಂದನು. ಮರುದಿನ ಭಿಕ್ಷೆಗಾಗಿ ಅವನು ಹಿಟ್ಟು ಕೇಳಲು ಹೋದಾಗ ದಿನಂಪ್ರತಿಗಿಂತಲೂ ಹೆಚ್ಚಿನ ಹಿಟ್ಟು ಸಿಕ್ಕಿತು. ಮನೆಗೆ ಬಂದು ವೃದ್ಧನ ಕಡೆಯಿಂದ ಹಿಟ್ಟನ್ನು ಪಡೆದ ವೃದ್ದೆಯು ಅದನ್ನು ಸಾಣೆ ಹಿಡಿಯಲು ಕುಳಿತಳು. ಅದನ್ನು ನೋಡಿ ಆ ಹುಡುಗಿಯು
'- ತನ್ನಿ ಅಮ್ಮ ನಾನೇ ಸಾಣೆ ಹಿಡಿಯುತ್ತೇನೆ ' ಎಂದ ಅದನ್ನು ತಾನು ಸಾಣೆ ಹಿಡಿಯತೊಡಗಿಡಗಳು. ಪರಾತು ತುಂಬಿ ಹೋಯಿತು. ಅದರ ನಂತರ ವೃದ್ದೆಯು ಅಡುಗೆ ಮಾಡಲು ಹೊರಟಾಗ
'- ಅಮ್ಮ ನಾನು ಅಡುಗೆ ಮಾಡುತ್ತೇನೆ '
ಎಂದು ಹೇಳಿ ಅಡುಗೆ ಮನೆಗೆ ಹೋದಳು. ಆಗ ವೃದ್ಧೆಯು
'- ಮಗಳೇ ನಿನ್ನ ಕೈ ಸುಟ್ಟು ಹೋಗುವವು ' ಎಂದರೂ ಅವಳ ಮಾತನ್ನು ಕೇಳದೆ ಅಡುಗೆ ಮನೆಯನ್ನು ಸೇರಿ ತರತರದ ತಿಂಡಿ ಪದಾರ್ಥಗಳನ್ನು ಮಾಡಿದಳು. ಮೊದಲ ಅರ್ಧ ಹೊಟ್ಟೆ ಊಟ ಮಾಡಿ ಇರುತ್ತಿದ್ದ ಅವರೆಲ್ಲ ಅಂದು ಆ ಮನೆಯಲ್ಲಿ ಎಲ್ಲರೂ ಹೊಟ್ಟೆ ತುಂಬಾ ಊಟ ಮಾಡಿದರು.
ರಾತ್ರಿಯಲ್ಲಿ ಆ ವೃದ್ದೆಯ ಸಹೋದರ ಬಂದ.
'ಅಕ್ಕ ನಾನು ಇವತ್ತು ಊಟ ಮಾಡುತ್ತೇನೆ..!' ಎಂದು ಹೇಳಿದ. ವೃದ್ದೆಯು ಇಷ್ಟು ರಾತ್ರಿಯಲ್ಲಿ ಊಟ ಎಲ್ಲಿಂದ ತರುವುದು ಎಂದು ಬೇಸರಗೊಂಡಳು. ಆಗ ಆ ಹುಡುಗಿಯೂ ಕೇಳುತ್ತಾಳೆ...
'ಅಮ್ಮ ಯಾಕೆ ಏನಾಯಿತು..?'
ವೃದ್ದೆಯು ಹೇಳಿದಳು...
'-ನಿನ್ನ ಮಾವ ಬಂದಿದ್ದಾನೆ..! ಊಟ ಮಾಡಬೇಕು ಎನ್ನುತ್ತಿದ್ದಾನೆ. ಮಾಡಿದ ಅಡುಗೆ ರೊಟ್ಟಿ ಪಲ್ಯ ಎಲ್ಲ ಮುಗಿದಿದೆ. ಈಗ ಅವನಿಗೆ ಊಟ ಎಲ್ಲಿಂದ ತರಲಿ.?'
ಆಗ ಹುಡುಗಿಯು ಹೇಳುತ್ತಾಳೆ
' ಚಿಂತಿಸಬೇಡ ಅಮ್ಮ, ನಾನೆಲ್ಲ ಮಾಡುತ್ತೇನೆ ' ಎಂದು ಆ ಹುಡುಗಿಯು ಅಡುಗೆ ಮನೆಗೆ ಹೋಗಿ ಮಾವನಿಗೋಸ್ಕರ 36 ವ್ಯಂಜನಗಳನ್ನು ಮಾಡಿದಳು. ಮಾವನು ತೃಪ್ತಿಯಿಂದ ಊಟ ಮಾಡಿ
"- ಇಂಥ ಊಟವನ್ನು ನಾನು ಜೀವನದಲ್ಲಿ ಎಂದಿಗೂ ಮಾಡಿಲ್ಲ "
ಎಂದು ಹೇಳಿದ. ವೃದ್ದೆಯು
'- ನಿನ್ನ ಸೊಸೆ ಇದೆಲ್ಲ ಮಾಡಿದ್ದು..!'
ಎಂದು ಹೇಳಿದಳು. ಸಂಜೆಗತ್ತಲಾಯಿತು.
"- ಅಮ್ಮ ಮಂಚ ಸಿದ್ದಪಡಿಸಿ ದೀಪ ಹಚ್ಚಿಡು. ನಾನು ಕೋಣೆಯಲ್ಲೇ ಮಲಗುತ್ತೇನೆ."
ಆ ಹುಡುಗಿ ಹೇಳಿದಾಗ ವೃದ್ದೆಯು
"- ಮಗಳೇ, ನೀನಗೊಬ್ಬಳಿಗೆ ಹೆದರಿಕೆ ಆಗುತ್ತದೆ. ನೀನು ಹೆದರುವಿ..!" ಆತಂಕಗೊಂಡಳು.
"- ಇಲ್ಲಮ್ಮ ನಾನು ಕೋಣೆಯಲ್ಲಿ ಮಲಗುತ್ತೇನೆ. ನಾನು ಹೆದರುವುದಿಲ್ಲ."
ಎಂದು ಹೇಳಿ ಅವಳು ಕೋಣೆಯಲ್ಲಿ ಹೋಗಿ ಮಲಗಿಕೊಂಡಳು.
ಅರ್ಧ ರಾತ್ರಿಯಲ್ಲಿ ಅವಳಿಗೆ ಎಚ್ಚರವಾಯಿತು. ನಾಲ್ಕೂ ಕಡೆ ಲಕ್ಷ ಕೊಟ್ಟು ನೋಡಲು ಮನೆ ತುಂಬಾ ದ್ರವ್ಯ ಸಂಪತ್ತೇ ತುಂಬಿಕೊಂಡಿತು. ಅವಳು ಅಲ್ಲಿಂದೆದ್ದು ಹೊರಗಡೆ ಹೋಗತೊಡಗಿದಳು. ದಾರಿಯಲ್ಲಿ ವೃದ್ಧ ಬ್ರಾಹ್ಮಣನೊಬ್ಬ ಮಲಗಿದ್ದನು. ಇವಳು ಹೋಗುವುದನ್ನು ನೋಡಿ
'- ಮಗಳೇ ಎಲ್ಲಿಗೆ ಹೊರಟಿ..!?'
ಎಂದು ಕೇಳಿದ.
'- ನಾನಂತೂ ಆ ಮನೆಯ ದರಿದ್ರತನ ದೂರಗೊಳಿಸಲು ಬಂದಿದ್ದೆ. ನಿನಗೂ ಕೂಡ ನಿನ್ನ ಮನೆಯ ದಾರಿದ್ರ್ಯವನ್ನು ದೂರ ಮಾಡಿಕೊಳ್ಳುವುದಿದ್ದರೆ ನನ್ನಿಂದ ಮಾಡಿಸಿಕೊ. ' ಎಂದು ಆ ವೃದ್ಧನ ಮನೆಯ ಒಳಗಡೆ ಕಣ್ಣಾಡಿಸಿದಳು. ಆ ಮನೆಯೂ ಕೂಡ ಧನರಾಶಿಯಿಂದ ತುಂಬಿತು.
ಮರುದಿನ ಬೆಳಗ್ಗೆ ಎಲ್ಲರೂ ಎಚ್ಚರವಾದಾಗ ಆ ಹುಡುಗಿಯು ಎಲ್ಲೂ ಕಾಣದಾದಳು. ಅವಳನ್ನು ಹುಡುಕ ತೊಡಗಿದರು. ಆಗ ಆ ವೃದ್ಧನು ಹೇಳಿದ
"- ಅವಳು ಮಾತೆ ಲಕ್ಷ್ಮಿ ಆಗಿದ್ದಳು. ನಿನ್ನ ಜೊತೆ ನನ್ನ ಮನೆಯ ದಾರಿದ್ರ್ಯವನ್ನು ತೊಡೆದು ಹಾಕಿದಳು. ಶ್ರೀ ಲಕ್ಷ್ಮಿ ಮಾತೆ ನಮ್ಮ ದಾರಿದ್ರ್ಯವನ್ನು ಹೇಗೆ ದೂರ ಮಾಡಿದೆಯೋ, ಹಾಗೆ ಎಲ್ಲರದೂ ದೂರಗೊಳಿಸಲಿ 🙏 "
ಎಂದು ಆ ವೃದ್ದನು ಲಕ್ಷ್ಮಿ ಮಾತೆಗೆ ಕೈ ಮುಗಿದನು.
ಅರಳಿ ಮರದಲ್ಲಿ ಶ್ರೀ ಮಹಾಲಕ್ಷ್ಮಿಯ ವಾಸವು ಇರುತ್ತದೆ. ಹೀಗಾಗಿ ನಿತ್ಯ ನಿಯಮದಂತೆ ಅರಳಿ ಮರಕ್ಕೆ ಶುದ್ದ ಮನಸ್ಸಿನಿಂದ ಪೂಜೆ ಪುನಸ್ಕಾರಗಳನ್ನು ಮಾಡಿದಲ್ಲಿ ಭಕ್ತರ ಮನೋ ಇಚ್ಛೆಗಳು ಪೂರ್ಣಗೊಳ್ಳುತ್ತವೆ.
ಜೈ ಶ್ರೀ ಮಹಾಲಕ್ಷ್ಮಿಯೇ ನಮಃ