ಸಂಕಟ ಬಂದಾಗ ವೆಂಕಟ ರಮಣ ಎನ್ನುವ ಮಾತೇ ಇದೆ. ನಾವು ಅತಿಯಾಗಿ ಖುಷಿಯಲ್ಲಿ ಅಥವಾ ಸುಖದಲ್ಲಿ ಇರುವಾಗ ಖಂಡಿತವಾಗಿಯೂ ನಮಗೆ ದೇವರ ನೆನಪು ಬರುವುದಿಲ್ಲ. ಆದರೆ ಸಂಕಷ್ಟಗಳ ಸರಮಾಲೆಗಳು ಬಂದಾಗ ಮೊದಲಿಗೆ ನೆನಪಿಗೆ ಬರುವುದು ದೇವರು. ದೈಹಿಕ, ಮಾನಸಿಕ ಹಾಗೂ ಆರ್ಥಿಕ ಸಂಕಷ್ಟದ ಸಮಯದಲ್ಲಿ ನಾವು ದೇವರ ಮೊರೆ ಹೋಗುತ್ತೇವೆ.

ಹೆಚ್ಚಿನವರು ದೇವಸ್ಥಾನಗಳಿಗೆ ಹೋಗಿ ದೇವರ ದರ್ಶನ ಪಡೆದು ಅಲ್ಲಿ ತಮ್ಮ ಮನದ ಇಂಗಿತ ಹೇಳಿಕೊಳ್ಳುವರು. ಇನ್ನು ಕೆಲವರು ಮನದಲ್ಲೇ ಏನಾದರೂ ಹರಕೆ ಹೊತ್ತುಕೊಳ್ಳುವರು. ತಮ್ಮ ಬೇಡಿಕೆಯು ಈಡೇರಿದರೆ ಆಗ ಹರಕೆ ತೀರಿಸುವರು. ದೇವರಲ್ಲಿ ನಮ್ಮ ದುಃಖವನ್ನು ಯಾವಾಗಲೂ ಹೋಗಿ ಹೇಳಿಕೊಳ್ಳುತ್ತೇವೆ. ಆದರೆ ನಾವು ಯಾವತ್ತೂ ಸಂತೋಷವಾಗಿದ್ದಾಗ ದೇವರ ಬಳಿ ಹೋಗಿದ್ದೇವೆಯಾ? ಇಲ್ಲ ಎನ್ನುವ ಉತ್ತರವೇ ಬರುವುದು. ಆದರೆ ಇಲ್ಲಿ ನಿಮಗೆ ಸಂಕಷ್ಟ ಬಂದಾಗ ದೇವಸ್ಥಾನಕ್ಕೆ ಹೋಗಬೇಕಾಗಿಲ್ಲ. ಯಾಕೆಂದರೆ ದೇವರು ಎಲ್ಲಾ ಕಡೆಯಲ್ಲೂ ಇರುತ್ತಾನೆ. ಆತನನ್ನು ಒಲಿಸಿಕೊಳ್ಳಲು ನೀವು ಒಂದು ದೀಪ ಹಚ್ಚಿಟ್ಟರೆ ಸಾಕು

(ಎಣ್ಣೆ ದೀಪ ಹಚ್ಚಲು ಯಾವಾಗಲೂ ಸಾಸಿವೆ ಎಣ್ಣೆ ಅಥವಾ ತುಪ್ಪ ಬಳಸಿಕೊಳ್ಳಿ)

ಅನಾರೋಗ್ಯವನ್ನು ದೂರವಿರಲು.
ರೋಗವನ್ನು ದೂರವಿಡಬೇಕಾದರೆ ಅಥವಾ ನೀವು ದೀರ್ಘಕಾಲದಿಂದ ಬಳಲುತ್ತಿರುವ ರೋಗದಿಂದ ಮುಕ್ತಿ ಪಡೆಯಬೇಕು ಎಂದು ಆಗಿದ್ದರೆ ಆಗ ನೀವು ಪ್ರತಿ ನಿತ್ಯವು ಸೂರ್ಯ ದೇವರ ಫೋಟೊದ ಮುಂದೆ ದೀಪ ಹಚ್ಚಬೇಕು.

ಜೀವನ ಸಂಗಾತಿಗಾಗಿ
ನೀವು ಮದುವೆಯಾಗಲು ಬಯಸುತ್ತಲಿದ್ದರೆ ಅಥವಾ ವೈವಾಹಿಕ ಜೀವನದ ಸಂಬಂಧವನ್ನು ಸುಧಾರಣೆ ಮಾಡಬೇಕು ಎಂದು ಬಯಸಿದ್ದರೆ ಆಗ ನೀವು ಪ್ರತೀ ದಿನ ಸಂಜೆ ವೇಳೆ ರಾಧಾ ಮತ್ತು ಕೃಷ್ಣ ದೇವರ ಫೋಟೊದ ಮುಂದೆ ದೀಪ ಹಚ್ಚಿ.

ದುಸ್ವಪ್ನಗಳ ದೂರ ಮಾಡಲು
ನಿಮಗೆ ಪದೇ ಪದೇ ದುಸ್ವಪ್ನಗಳು ಕಾಡುತ್ತಲಿದ್ದರೆ ಆಗ ನೀವು ಪಂಚಮುಖಿ ಹನುಮಂತ ದೇವರ ಫೋಟೊದ ಮುಂದೆ ದೀಪ ಹಚ್ಚಿ. ಇದರಿಂದ ನೀವು ರಾತ್ರಿ ಒಳ್ಳೆಯ ಮತ್ತು ಭೀತಿಯಿಲ್ಲದೆ ನಿದ್ರೆ ಮಾಡಬಹುದು

ಆರ್ಥಿಕತೆ ಸುಧಾರಣೆಗೆ
ನೀವು ಆರ್ಥಿಕವಾಗಿ ತುಂಬಾ ಸಂಕಷ್ಟದಲ್ಲಿ ಇದ್ದರೆ ಆಗ ನೀವು ಮನೆಯ ಉತ್ತರ ಭಾಗದಲ್ಲಿ ಕುಬೇರ ದೇವರ ಫೋಟೊವನ್ನು ಇಟ್ಟು ಅಲ್ಲಿ ಪ್ರತಿನಿತ್ಯ ದೀಪ ಹಚ್ಚಬೇಕು. ಇದರಿಂದ ನಿಮ್ಮ ಆರ್ಥಿಕ ಸಮಸ್ಯೆಗಳು ದೂರವಾಗುವುದು. ಆರ್ಥಿಕ ಪರಿಸ್ಥಿತಿಯು ಸುಧಾರಣೆ ಆಗುವ ತನಕ ಹೀಗೆ ಮಾಡಿ.

ಉದ್ಯೋಗದ ಕಡೆ
ನಿಮ್ಮ ಮನೆ ಹಾಗೂ ಉದ್ಯೋಗದ ಕಡೆಯಲ್ಲಿ ಗಣಪತಿ ದೇವರ ವಿಗ್ರಹವನ್ನು ಇಟ್ಟುಬಿಡಿ. ನೀವು ಪ್ರತಿನಿತ್ಯ ಉದ್ಯೋಗದ ಕಡೆ ತೆರಳಿದಾಗ ಮತ್ತು ಮನೆಗೆ ಬಂದಾಗ ಗಣಪತಿ ಮೂರ್ತಿ ಮುಂದೆ ಒಂದು ದೀಪ ಹಚ್ಚಿಬಿಡಿ. ಇದರಿಂದ ಮನೆ ಹಾಗೂ ಕಚೇರಿಯಲ್ಲಿ ಶಾಂತಿ ಹಾಗೂ ಸಮೃದ್ಧಿಯು ಉಂಟಾಗುವುದು.

ಮನೆಯಲ್ಲಿನ ಕಲಹ ನಿವಾರಣೆಗೆ
ಮನೆಯಲ್ಲಿ ನಿಮಗೆ ಹೆಚ್ಚಿನ ಶಾಂತಿ ಬೇಕಿದ್ದರೆ ಮತ್ತು ಎಲ್ಲಾ ರೀತಿಯ ಸಮಸ್ಯೆಗಳನ್ನು ನಿವಾರಣೆ ಮಾಡಬೇಕಿದ್ದರೆ ಆಗ ನೀವು ಪ್ರತಿನಿತ್ಯವು ರಾಮ ದರ್ಬಾರ್ ಫೋಟೊ(ರಾಮ, ಲಕ್ಷ್ಮಣ, ಸೀತೆ ಮತ್ತು ಹನುಮಂತ ಇರುವ ಫೋಟೊ) ಮುಂದೆ ದೀಪ ಹಚ್ಚಿಬಿಡಿ.

ಉತ್ತರ ದಿಕ್ಕು
ಮನೆಯ ಉತ್ತರ ಭಾಗದಲ್ಲಿ ದೀಪವನ್ನು ಹಚ್ಚಿಟ್ಟರೆ ಆಗ ಆ ಮನೆಗೆ ಎಂಟು ದಿಕ್ಕುಗಳಿಂದ ಸಂಪತ್ತು ಅಥವಾ ಲಕ್ಷ್ಮೀ ದೇವಿಯಿಂದ ಅಷ್ಟೈಶ್ವರ್ಯವು ಸಿಗುವುದು ಎಂದು ಹೇಳಲಾಗುತ್ತದೆ. ಆತ ಆರ್ಥಿಕವಾಗಿ ಸ್ಥಿರವಾಗಿ ಇರುವನು.

ಪೂರ್ವ
ನೀವು ಪ್ರತಿನಿತ್ಯವು ಮನೆಯ ಪೂರ್ವ ದಿಕ್ಕಿನಲ್ಲಿ ದೀಪ ಹಚ್ಚಿಟ್ಟರೆ ಆಗ ನಿಮಗೆ ಆರೋಗ್ಯ ಹಾಗೂ ಮನಸ್ಸಿಗೆ ಶಾಂತಿಯು ಸಿಗುವುದು. ಇದರಿಂದ ಜೀವನವು ಸರಾಗವಾಗಿ ಸಾಗುವುದು.

ಪಶ್ಚಿಮ
ಮನೆಯ ಪಶ್ಚಿಮ ದಿಕ್ಕಿನಲ್ಲಿ ದೀಪ ಹಚ್ಚಿಟ್ಟರೆ ಆಗ ಎಲ್ಲಾ ರೀತಿಯ ಸಾಲದಿಂದ ನೀವು ಮುಕ್ತರಾಗಲಿದ್ದೀರಿ ಮತ್ತು ಶತ್ರುಗಳ ವಿರುದ್ಧ ಗೆಲ್ಲಲು ನಿಮಗೆ ನೆರವಾಗುವುದು. ಇದು ವ್ಯಾಪಾರ ಮತ್ತು ವೈಯಕ್ತಿಕ ಶತ್ರುತ್ವವನ್ನು ನಿವಾರಣೆ ಮಾಡುವುದು.