ಪೂಜೆಯಲ್ಲಿ ನಾವು ತೀರ್ಥವನ್ನು ಹೇಗೆ ತೆಗೆದುಕೊಳ್ಳಬೇಕು..? ಈ ವಿಧಾನವನ್ನು ಪಾಲಿಸಿ..!!
ನಾವು ದೇವಸ್ಥಾನಕ್ಕೆ ಭೇಟಿ ನೀಡಿದಾಗಲೆಲ್ಲಾ ಅರ್ಚಕರು ನಮಗೆ ಪವಿತ್ರ ನೀರನ್ನು ನೀಡುತ್ತಾರೆ. ಇದನ್ನೇ ತೀರ್ಥ ಎಂದು ಕರೆಯಲಾಗುತ್ತದೆ. ಪೂಜೆಯು ಸಂಪೂರ್ಣಗೊಂಡಾಗ ಅರ್ಚಕರು ತೀರ್ಥವನ್ನು ನೀಡುತ್ತಾರೆ. ಈ ಸಂದರ್ಭದಲ್ಲಿ ನಾವು ಹಸ್ತ ಗೋಕರ್ಣ ಮುದ್ರೆಯನ್ನು ಮಾಡಿ ತೀರ್ಥವನ್ನು ತೆಗೆದುಕೊಳ್ಳುತ್ತೇವೆ. ತೀರ್ಥವನ್ನು ನಾವು ಹೇಗೆ ತೆಗೆದುಕೊಳ್ಳಬೇಕು..? ತೀರ್ಥವನ್ನು ತೆಗೆದುಕೊಳ್ಳುವಾಗ ನಾವು ಯಾವೆಲ್ಲಾ ತಪ್ಪುಗಳನ್ನು ಮಾಡಬಾರದು..?
ತೀರ್ಥವನ್ನು ನಾವು ಹೇಗೆ ತೆಗೆದುಕೊಳ್ಳಬೇಕು..?
ಗೋಕರ್ಣ ಮುದ್ರೆಯಲ್ಲಿ ನಮ್ಮ ಹೆಬ್ಬೆರಳು ತೋರ್ಬೆರಳನ್ನು ನಿಯಂತ್ರಿಸುತ್ತದೆ. ತೋರ್ಬೆರಳಿನ ಬೆನ್ನಿನ ಮೇಲೆ ಹೆಬ್ಬೆರಳನ್ನು ಇಡಲಾಗುತ್ತದೆ. ಮತ್ತುಳಿದ ಮೂರು ಬೆರಳುಗಳು ಮುಂದಕ್ಕೆ ಚಾಚಿಕೊಂಡಿರುತ್ತದೆ. ಈ ಸಂದರ್ಭದಲ್ಲಿ ನಾವು ಹಸ್ತ ಗೋಕರ್ಣ ಮುದ್ರೆಯನ್ನು ಮಾಡಿ ತೀರ್ಥವನ್ನು ತೆಗೆದುಕೊಳ್ಳುತ್ತೇವೆ.
ಎಷ್ಟು ಬಾರಿ ತೀರ್ಥದ ನೀರನ್ನು ತೆಗೆದುಕೊಳ್ಳಬೇಕು..?
ಶಾಸ್ತ್ರದಲ್ಲಿ ಉಲ್ಲೇಖಿಸಿರುವ ಸೂಚನೆಯ ಪ್ರಕಾರ, ಮನೆಯಲ್ಲಿ ಸಾಮಾನ್ಯವಾಗಿ ಪೂಜೆ ಮಾಡಿದ ನಂತರ, ತೀರ್ಥವನ್ನು ತೆಗೆದುಕೊಳ್ಳಬಬೇಕು. ಅಂದು ಅನ್ನಗ್ರಹಣದ ಸಾಧ್ಯತೆ ಇಲ್ಲದಿದ್ದರೆ ಮೂರು ಬಾರಿ ತೀರ್ಥವನ್ನು ತೆಗೆದಿಕೊಳ್ಳಬೇಕು. ನೀವು ದೇವಸ್ಥಾನಕ್ಕೆ ಹೋದಾಗ ಒಮ್ಮೆ ಮಾತ್ರ ತೀರ್ಥದ ನೀರನ್ನು ತೆಗೆದುಕೊಳ್ಳಿ. ಏಕಾದಶಿಯಂದು ಉಪವಾಸ ಮಾಡುವ ಆರಾಧಕರು ಅಂದು ಉಪವಾಸವನ್ನು ಆಚರಿಸುತ್ತಾರೆ ಮತ್ತು ಮರುದಿನ ಸೂರ್ಯೋದಯದಲ್ಲಿ ಮತ್ತೊಮ್ಮೆ ತೀರ್ಥವನ್ನು ತೆಗೆದುಕೊಳ್ಳಬೇಕು. ಇದು ನಿಮ್ಮ ಉಪವಾಸ ವ್ರತದ ಮುಕ್ತಾಯವನ್ನು ಸೂಚಿಸುತ್ತದೆ.
ಈ ಸಂದರ್ಭಗಳಲ್ಲಿ ತೀರ್ಥವನ್ನು ತೆಗೆದುಕೊಳ್ಳಿ
ಯಾರಿಗಾದರೂ ಕೊನೆಯ ಸಮಯ ಬಂದಿದ್ದರೆ ಅಂದರೆ ಯಾವುದೇ ವ್ಯಕ್ತಿ ಸಾವಿನ ಅಂತಿಮ ಕ್ಷಣದಲ್ಲಿದ್ದರೆ ತುಳಸಿಪತ್ರೆ (ತುಳಸಿ ಎಲೆ) ಮತ್ತು ದೇವತೀರ್ಥವನ್ನು ಅವರ ಬಾಯಿಗೆ ಹಾಕಲಾಗುತ್ತದೆ. ಯಾರಾದರೂ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರೆ, ಅವರಿಗೆ ತೀರ್ಥದ ನೀರನ್ನು ಕುಡಿಸಬೇಕು.
ಪೂಜೆಯ ನಂತರ ಮಾತ್ರ ನಾವು ತೀರ್ಥವನ್ನು ತೆಗೆದುಕೊಳ್ಳಬೇಕೆಂಬದನ್ನು ಗಮನದಲ್ಲಿಟ್ಟುಕೊಳ್ಳಿ. ಮತ್ತು ತೀರ್ಥವನ್ನು ತೆಗೆದುಕೊಳ್ಳುವಾಗ ನಾವು ಈ ಮೇಲಿನ ಎಲ್ಲಾ ನಿಯಮಗಳನ್ನು ಅನುಸರಿಸಬೇಕು. ಇದರಲ್ಲಿ ನೀವು ಗಮನದಲ್ಲಿಟ್ಟುಕೊಳ್ಳಬೇಕಾದ ಮತ್ತೊಂದು ಪ್ರಮುಖ ವಿಚಾರವೆಂದರೆ ನೀವು ತೀರ್ಥವನ್ನು ತೆಗೆದುಕೊಂಡ ನಂತರ ನಿಮ್ಮ ಎರಡೂ ಅಂಗೈಯನ್ನು ತಲೆಗೆ ಸವರಿಕೊಳ್ಳಬಾರದು ಬದಲಾಗಿ ಎರಡು ಅಂಗೈಗಳನ್ನು ಉಜ್ಜಬೇಕು.