ತಿರುಪತಿಗೆ ಹೋದಾಗ ಮೊದಲು ದರ್ಶನ ಮಾಡಬೇಕಾದದು ವರಾಹ ಸ್ವಾಮಿ ಯನ್ನು ಆನಂತರವೇ ವೆಂಕಟೇಶನ ದರ್ಶನ ಮಾಡಬೇಕು

ವಿಷ್ಣುವಿನ ದಶಾವತಾರಗಳಲ್ಲಿ ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ಭೌದ್ದ, ರಾಮ, ದ್ವಾಪರದಲ್ಲಿ ಕೃಷ್ಣಾವತಾರಗಳ ನಡುವೆ ಕಲಿಯುಗದ ಆರಂಭಕ್ಕೂ ಮೊದಲು ಭೃಗು ಮಹರ್ಷಿಗಳ ನೆಪ ದಿಂದಾಗಿ ಮಹಾವಿಷ್ಣು ತನ್ನ ಪತ್ನಿ ಲಕ್ಷ್ಮಿಯನ್ನು ಹುಡುಕುತ್ತಾ ಬಂದು ಬ್ರಹ್ಮನ ಆದೇಶದಂತೆ ಭಕ್ತರಿಗೆ ದರ್ಶನ ಕೊಡಲೆಂದೇ ತಿರುಪತಿ ಯಲ್ಲಿ ನೆಲೆಸಿದ. ಮೊದಲು ಭೂಲೋಕಕ್ಕೆ ಕಾಲಿಟ್ಟ ವೆಂಕಟೇಶನಿಗೆ ವಾಸಿಸಲು ಭೂಮಿ ಕೊಟ್ಟವನು ವರಾಹಸ್ವಾಮಿ. ಹೀಗಾಗಿ ತಿರುಪತಿಗೆ ಹೋದಾಗ ಮೊದಲು ದರ್ಶನ ಮಾಡಬೇಕಾದದು ವರಾಹ ಸ್ವಾಮಿ ಯನ್ನು ಆನಂತರವೇ ವೆಂಕಟೇಶನ ದರ್ಶನ ಮಾಡಬೇಕು. ಅಕಸ್ಮಾತ್ ಆಗದಿ ದ್ದಲ್ಲಿ ವೆಂಕಟೇಶನ ದರ್ಶನ ಮಾಡಿದ ನಂತರ ವರಾಹ ಸ್ವಾಮಿಯನ್ನು ದರ್ಶನ ಮಾಡಬೇಕು. ವೆಂಕಟೇಶನಾಗಿ, ಶ್ರೀನಿವಾಸನಾಗಿ, ಆಕಾಶರಾಜನ ಮಗಳು ಪದ್ಮಾವತಿಯ ನ್ನು ವಿವಾಹವಾಗಲು ಕುಬೇರನ ಕೈಲಿ ಸಾಲ ಮಾಡಿದ. ಈ ಸಾಲ ತೀರಿಸುವ ತನಕವೂ ಶ್ರೀನಿವಾಸ ತಿರುಪತಿಯಲ್ಲಿ ಇರುವುದಾಗಿ ನೆಲೆಸಿದ.ಇನ್ನೂ ಸಾಲ ತೀರಿಸುತ್ತಲೆ ಇದ್ದಾನೆ.

ಹಿಂದೆ ವ್ಯಾಸರಾಯರು 12 ವರ್ಷಗಳ ನಂತರ ತಿರುಪತಿಗೆ ಬಂದರು. ಇವರು ಬರುವ ಮೊದಲು ಸ್ವಲ್ಪ ಕಾಲ ತಿರುಪತಿಯಲ್ಲಿ ಗರ್ಭಗುಡಿಯ ಬಾಗಿಲು ಮುಚ್ಚ ಲಾಗಿತ್ತು. ದೇವತೆಗಳು ದೇವಲೋಕದಿಂದ ಬಂದು ವೆಂಕಟೇಶನನ್ನು ಪೂಜಿ ಸುತ್ತಿದ್ದರು. ವ್ಯಾಸರಾಯರು ತಮ್ಮ ಶಿಷ್ಯ ಸಾಳ್ವ ನರಸಿಂಹನ ಜೊತೆ ಬಂದು ಗರ್ಭ ಗುಡಿಯ ಬಾಗಿಲನ್ನು ತೆಗೆದರು. ಆ ಕೂಡಲೇ, ಸಾಳ್ವ ನರಸಿಂಹ ನಿಗೆ ವೆಂಕಟೇಶ್ವರ ಉಗ್ರರೂಪನಾಗಿ ಕಾಣಿಸಿದ. ಭಗವಂತನ ಉಗ್ರ ರೂಪ ನೋಡಿ ಗಾಬರಿಗೊಂಡು ವ್ಯಾಸರಾಯರ ಹಿಂದೆ ಅಡಗಿಕೊಂಡನು, ವ್ಯಾಸರಾಯರು ಶಿಷ್ಯನಿಗೆ ಧೈರ್ಯ ತುಂಬಿದರು, 'ಕಳ್ಳನ ಮನಸು ಹುಳ್ಳುಳ್ಳಗೆ' ಎಂಬಂತೆ, ಸಾಳ್ವ ನರಸಿಂಹನಿಗೆ ವೆಂಕಟೇಶ್ವರ ಈ ರೀತಿ ಉಗ್ರ ರೂಪದಲ್ಲಿ ಕಂಡು ಬರಲು ಕಾರಣ ಶ್ರೀನಿವಾಸನಿಗೆ ಪೂಜೆ ಮಾಡುವ ಮುಖ್ಯ ಅರ್ಚಕ ನಾಗಿದ್ದಾಗ ಸಾಳ್ವ ನರಸಿಂಹ ಒಮ್ಮೆ ಅವರ ಸಹಾಯಕ ಅರ್ಚಕರು ಏನೋ ತಪ್ಪು ಮಾಡಿದರೆಂದು, ಅವರಿಗೆಲ್ಲ ಕಠಿಣವಾದ ಶಿಕ್ಷೆಯನ್ನು ಕೊಟ್ಟಿದ್ದನು. ನಂತರ ಪಶ್ಚಾತಾಪ ಪಟ್ಟು, ಅದರ ಪ್ರಾಯಶ್ಚಿತ್ತ ಮಾಡಿಕೊಳ್ಳಲು ವ್ಯಾಸ ರಾಯರ ಜೊತೆ ನಿಂತ ಸಾಳ್ವ ನರಸಿಂಹನಿಗೆ ವೆಂಕಟೇಶ ಉಗ್ರರೂಪಿಯಾಗಿ ಕಾಣಿಸಿ ಕೊಂಡನು.

ಧೈರ್ಯ ತುಂಬಿದ ವ್ಯಾಸರಾಯರು, ವೆಂಕಟೇಶನ ಉಗ್ರ ರೂಪ ಸಮಾಧಾನಪಡಿಸಲೆಂದು ಕೂಡಲೇ ಚೀಲಗಟ್ಟಲೆ ತೊಲಗಳಷ್ಟು ಕರ್ಪೂರ ವನ್ನು ತರಿಸಿ ತಿಮ್ಮಪ್ಪನ ಅರ್ಧ ಕಣ್ಣು, ಅರ್ಧ ಮೂಗು, ಮುಚ್ಚು ವಂತೆ ಆ ಕಡೆ ಈ ಕಡೆ ಒಂದು ತರಹ 'ಯು' ಆಕಾರದಲ್ಲಿ ಬಳಿದು ಮುಚ್ಚಿ ಬಿಟ್ಟರು. ನಡುವೆ ಕಸ್ತೂರಿ ನಾಮ (ಕಸ್ತೂರೀ ತಿಲಕಂ ಲಲಾಟ ಫಲಕೇ ವಕ್ಷಸ್ಥಲೇ ಕೌಸ್ತುಭಂ, ನಾಸಾದ್ರೆ ನವ ಮೌಕ್ತಿಕಂ ಕರತಲೇ ವೇಣುಂ ಕರೆ ಕಂಕಣಂ ಸರ್ವಾಂಗೆ ಹರಿಚಂದ್ರನಂ ಚ ಕಲಯನ್ ಕಂಠೇ ಚ ಮುಕ್ತಾವಲೀಂ). ಮೊದಲು ಇದ್ದದ್ದು ಒಂದೇ ನಾಮ - 'ಕಸ್ತೂರಿ ತಿಲಕೇ'. ಈಗ ಇದನ್ನು ನೋಡಿದ ಭಕ್ತರು ಭಗವಂತನ ದೃಷ್ಟಿ ಇಲ್ಲವಲ್ಲ ಅಂತ ಹೇಳಿದರು. ಅದಕ್ಕೆ ವ್ಯಾಸರಾಯರು ಮುಂದಿನ ಗುರುವಾರ ಪರಮಾತ್ಮನ ಪೂರ್ಣ ದರ್ಶನ ಆಗುತ್ತದೆ ಎಂದರು. ಪರಿಹಾರಾರ್ಥವಾಗಿ ಗುರುವಾರದ ದಿನ ಅನ್ನಕೂಟೋತ್ಸವ ಮಾಡಿಸಿದರು. ಅಂದರೆ ರಾಶಿ( ಹೆಡಿಗೆ ಗಟ್ಟಲೆ) ಚಿತ್ರಾನ್ನವನ್ನು ಮಾಡಿ ಆಲಯದ ಮುಂದೆ ಗರುಡ ನಿಂತಲ್ಲಿಂದ ಭಗವಂತನ ದ್ವಾರದ ತನಕ ಅಂದರೆ ಭಕ್ತರು ದೇವರ ದರ್ಶನ ಮಾಡಿ ಬಾಗಿಲ ಕಡೆ ತಿರುಗುವಲ್ಲಿ ತನಕ ಚಿತ್ರಾನ್ನವನ್ನು ಹರಡುತ್ತಾರೆ. ಜೊತೆಗೆ ನಾನಾ ತರದ ವಿಧ ವಿಧವಾದ ಭೋರಿ ಭೋಜನ ಭಕ್ಷಗಳ ರಾಶಿಯನ್ನೇ ಮಾಡಿ ಇಟ್ಟಿರುತ್ತಾರೆ.‌

ಪ್ರತಿ ಗುರುವಾರ ಮಾಡುವ ಅನ್ನಕೂಟೋತ್ಸವದ ದಿನ ವೆಂಕಟೇಶ್ವರನ ಅಲಂಕಾರ ನೋಡಲು ಎರಡು ಕಣ್ಣು ಸಾಲದು. ಎಂಟೂವರೆ ಅಡಿ ಎತ್ತರದ ಶ್ರೀನಿವಾಸ, ಮಿಂಚುವ ಕೆನ್ನೆ, ಮುಗುಳುನಗೆಯ ತುಟಿ, ಕಾಮನಬಿಲ್ಲಿನಂತೆ ವಾಲಿದ ಹುಬ್ಬು, ಸುಂದರ ಸೌಮ್ಯವಾದ ದೃಷ್ಟಿ, ಉದ್ದನೆ ಜಡೆ, ಸಂಪಿಗೆ ಮೂಗು, ಕೈಯಲ್ಲಿ ಕಡಗ ಕುತ್ತಿಗೆಯಲ್ಲಿ ಪದಕದ ಕಂಠೀಹಾರ, ಸೂರ್ಯ ಕತ್ತಿ, 108 ಬಂಗಾರದ ತುಳಸಿ ಎಸಳಿನ ಹಾರ, ಸಾಲಿಗ್ರಾಮದ ಹಾರ, ಆಕಾಶ ರಾಜ ಕೊಟ್ಟ ವಜ್ರಕಿರೀಟ, ಸಾವಿರದ ಎಂಟು ಬಂಗಾರ ನಾಣ್ಯಗಳ, ಒಂದೊಂದು ನಾಣ್ಯದಲ್ಲೂ ಲಕ್ಷ್ಮಿ ಚಿತ್ರ, ಹಾಗೂ ವಿಶ್ವಾಯ ನಮಃ ಬರೆದಿರುವ ಹಾರ ಕಸ್ತೂರಿ ತಿಲಕ, ಕಚ್ಚೆ ಹಾಕಿ ಉಡಿಸಿದ ಬಂಗಾರದ 18 ಮೊಳದ ಪೀತಾಂಬರ ಸೀರೆಯ ಜಗ ಮಗ ಹೊಳಪು, ನಾನಾ ಸುಗಂಧ ಭರಿತ ಪುಷ್ಪಗಳ ಶೃಂಗಾರ. ಇಂತಹ ಸುಂದರವಾದ ತಿರುಪತಿ ಶ್ರೀನಿವಾಸನ ವಿಗ್ರಹ ಮಾನವ ನಿರ್ಮಿತ ವಾದದಲ್ಲ ಸಾಕ್ಷಾತ್ ಮಹಾ ವಿಷ್ಣುವೇ ಶ್ರೀನಿವಾಸನಾಗಿ ಭೂಲೋಕದಲ್ಲಿ ಅವತರಿಸಿ ತನ್ನ ಲೀಲಾ ನಾಟಕಗಳನ್ನು ತೋರಿಸಿ. ಕಲಿಯುಗದಲ್ಲಿ ಭಕ್ತರಿಗೆ ದರ್ಶನ ಕೊಡುವ ಸಲುವಾಗಿಯೇ ಶಿಲೆಯಾಗಿ ನಿಂತನು.‌ ಸರ್ವಾಂಗ ಸುಂದರ ಶ್ರೀನಿವಾಸನ ದರ್ಶನ ಪಡೆಯಲು ಅನೇಕರು ಮುಂಚಿತವಾಗಿಯೇ ಹೆಸರು ನೊಂದಾಯಿಸಿರುತ್ತಾರೆ. ಮತ್ತೆ ಕೆಲವರು ತಮ್ಮ ಹರಕೆಗಳನ್ನು ತೀರಿಸಿಕೊಳ್ಳಲು ಇದನ್ನು ಮಾಡಿಸುತ್ತಾರೆ. ಪೂಜೆ ಮಂಗಳಾರತಿ ಮುಗಿದ ಮೇಲೆ ಚಿತ್ರಾನ್ನ ಭಕ್ಷಗಳನ್ನು ಪ್ರಸಾದವಾಗಿ ಭಕ್ತರಿಗೆ ಹಂಚುತ್ತಾರೆ.

ಶ್ರೀನಿವಾಸನ ಪೂಜೆಗೆಂದೆ ವಿಶೇಷವಾಗಿ ಹೂಗಳನ್ನು ಬೆಳೆಯುತ್ತಾರೆ. ಈ ಹೂವುಗಳಿಗೂ ಹಳೆ ಕಥೆ ಇದೆ.‌ ಬಹಳ ಹಿಂದೆ ಶ್ರೀನಿವಾಸ ದೇವರ ಪೂಜೆಗೆ ಹೂಗಳು ಬೇಕೆಂದು ರಂಗನಾಥ ಎಂಬ ಶೂದ್ರನು ಭಗವಂತನಿಗೆ ಪ್ರಿಯವಾದ ಮರುಗ,ಮಲ್ಲಿಗೆ, ಸಂಪಿಗೆ, ಜಾಜಿ, ಪಾರಿಜಾತ, ತುಳಸಿ ಇಂಥ ಸುಗಂಧ ಭರಿತ ಹೂ ಗಿಡಗಳನ್ನು ಬೆಳೆಸಿ ಸುಂದರವಾದ ಉದ್ಯಾನವನವನ್ನು ಮಾಡಿದ್ದನು. ಬೇಸಿಗೆಯಲ್ಲಿ ನೀರಿನ ಅಭಾವ ಹೆಚ್ಚಾದಾಗ ಶ್ರೀದೇವಿ -ಭೂದೇವಿಯರೇ ಬಂದು ಬಂಗಾರದ ಬಾವಿಯನ್ನು ನಿರ್ಮಿಸಿದರಂತೆ, ರಂಗನಾಥನು ಅದರಿಂದ ನೀರು ಸೇರಿ ಗಿಡಗಳಿಗೆ ಹಾಕುತ್ತಿದ್ದನಂತೆ. ಈ ಹೂವಿನ ಉಧ್ಯಾನವನ ಇರುವುದು ಇರುವುದು 'ಆವು ಪಳ್ಳಿ 'ಎಂಬ ಹಳ್ಳಿಯಲ್ಲಿ. ಇಲ್ಲಿ ಬಿಡುವ ಹೂವುಗಳನ್ನು ಮಾತ್ರ ವೆಂಕಟೇಶ್ವರನ ಅಲಂಕಾರಕ್ಕೆ (ಪೂಜೆಗೆ) ಉಪಯೋಗಿಸುವುದು. ಇನ್ನೊಂದು ವಿಷಯ ಎಂದರೆ, ಭಗವಂತನಿಗೆ ಏರಿಸಿದ ನಿರ್ಮಾಲ್ಯದ ಹೂವುಗಳನ್ನು, ಎಲ್ಲಾ ದೇವಸ್ಥಾನಗಳಲ್ಲೂ ಭಕ್ತರಿಗೆ ಪ್ರಸಾದ ಕೊಟ್ಟಂತೆ ಇಲ್ಲಿ ಅವುಗಳನ್ನು ಭಕ್ತರಿಗೆ ಕೊಡುವುದಿಲ್ಲ. ಏಕೆಂದರೆ ಶ್ರೀನಿವಾಸನ ಪ್ರಸಾದ ಲಕ್ಷ್ಮಿಗೆ ಮಾತ್ರ ಸೀಮಿತ ಎಂದು. ತುಳಸಿ ಹಾರದ ಪ್ರಸಾದಾನು ಕೊಡುವುದಿಲ್ಲ. ಎರಡು ಬೆಟ್ಟಗಳ ಮಧ್ಯೆ ನಿಂತಿರುವ ತಿರುಪತಿ ತಿಮ್ಮಪ್ಪನ ಹಿಂದುಗಡೆ ಪಾತಾಳದಂತ ಬಾವಿ ಇದೆ. ಈ ಪಾತಾಳದಲ್ಲಿ ಸಪ್ತ ನದಿಗಳು ಹರಿಯುತ್ತದೆ. ನಿರ್ಮಾಲ್ಯದ ಪ್ರಸಾದಗಳನ್ನು ತೆಗೆದು ಈ ಪಾತಾಳದ ಬಾವಿಗೆ ಹಾಕುತ್ತಾರೆ. ಈ ಬಾವಿಯನ್ನು ವೈಕುಂಠ ಏಕಾದಶಿ ದಿನ ನೋಡುವ ಅವಕಾಶವಿದೆ.

ಶ್ರೀನಿವಾಸನನ್ನು ಬೆಟ್ಟ ಹತ್ತಿ ಹೋಗಿ, ದರ್ಶನ ಮಾಡುವುದು ಪುಣ್ಯಕರವಾದ್ದು,ಪೂರ್ವ ಜನ್ಮದ ಪಾಪಗಳನ್ನು ಕಳೆದುಕೊಳ್ಳಲು, ಇದು ಪುಣ್ಯಕರವಾದ ಮಾರ್ಗ. ನಾವು ದೇವರ ದರ್ಶನ ಬೇಗ ಆಗಲಿ ಎಂದು‌ ಆತುರ ಪಡುವುದ ಕ್ಕಿಂತ, ಬೆಟ್ಟದ ಮೇಲೆ ಹೆಚ್ಚು ಹೊತ್ತು ಇದ್ದಷ್ಟು ಗ್ರಹ ಪೀಡೆಗಳ ದೋಷ ಪರಿಹಾರವಾಗುತ್ತದೆ.‌ ಭಗವಂತ ನಿಧಾನವಾಗಿ ನಮಗೆ ದರ್ಶನ ಕೊಟ್ಟಷ್ಟು ನಮ್ಮ ಪಾಪಗಳನ್ನು ಕಳೆಯುತ್ತಾ ಕೊನೆಗೆ ದರ್ಶನ ಕೊಡುತ್ತಾನೆ ಎಂಬ ನಂಬಿಕೆ ಇದೆ. ಊರಿಂದ ಹೊರಡುವಾಗಲೇ ಭಗವಂತ ನಿನ್ನ ದರ್ಶನ ಚೆನ್ನಾಗಿ ಮಾಡಿಸು ಎಂದು ಬೇಡಿಕೊಂಡು ಹೊರಡಬೇಕು. ಇಲ್ಲಿ ವರಹ ಸ್ವಾಮಿಯ ದರ್ಶನವನ್ನು ಮಾಡಿದರೆ ರಾಹು ದೋಷ ಪರಿಹಾರವಾಗುತ್ತದೆ ಮತ್ತು ಮನೆ ಕಟ್ಟುವವರಿಗೆ ಭೂಮಿ ಬೇಗ ಸಿಗುತ್ತದೆ, ಮನೋಭಿಲಾಷೆಗಳು ನೆರವೇರುತ್ತದೆ.ಅನ್ನಕೂಟೊತ್ಸವ ಅಂದರೆ ಗರುಡೋತ್ಸವ ಇದನ್ನು ಐದು ಬಾರಿ ನೋಡಿದರೆ ಮಕ್ಕಳಾಗುತ್ತದೆ, ಹಾಗೂ ಇಂತಿಷ್ಟು ಬಾರಿ ಇದರಲ್ಲಿ ಪಾಲ್ಗೊಂಡರೆ ಮದುವೆಯಾಗುತ್ತದೆ, ಮನೆಯಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿ ಇದೆ. ಜೀವನದಲ್ಲಿ ಒಮ್ಮೆಯಾದರೂ ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ದರ್ಶನ ಬಂದು ಮಾಡಲೇಬೇಕು. "ಸಂಕಟ ಬಂದಾಗ ವೆಂಕಟರಮಣ" ನೇ ಆದರೂ ಭಗವಂತ ಭಕ್ತರಿಗೆ ತನ್ನ ದರ್ಶನ ಕೊಡಲೆಂದೇ ಭೂವೈಕುಂಠ ತಿರುಪತಿಯಲ್ಲಿ ನೆಲೆಸಿದ್ದಾನೆ. ಶ್ವೇತಾಯುಗದ ಶ್ರೀರಾಮನೆಂದೇ ಕರೆಸಿಕೊಳ್ಳುವ ಶ್ರೀನಿವಾಸನ ದರ್ಶನ ಭಾಗ್ಯ ಪಡೆಯಲು ಪುಣ್ಯ ಸಂಪಾದನೆಯೂ ಬೇಕು.