ಶ್ರೀರಂಗಪಟ್ಟಣದ ಶ್ರೀರಂಗನಾಥ

Sri Mahavishnu Info

ಕಾವೇರಿ ನದಿ ದಂಡೆಯ ಮೇಲಿರುವ ಶ್ರೀರಂಗಪಟ್ಟಣದ ಶ್ರೀರಂಗನಾಥ ಸ್ವಾಮಿ, ದೇವಸ್ಥಾನಕ್ಕೆ ಚಾರಿತ್ರಿಕ ಮಹತ್ವವಿದೆ. ಈ ದೇವಸ್ಥಾನ ಗಂಗರ ಕಾಲದಲ್ಲಿ ನಿರ್ಮಾಣವಾಯಿತು.

ಈ ಕ್ಷೇತ್ರದಲ್ಲಿ ಪುರಾಣ ಕಾಲದಲ್ಲಿ ಗೌತಮ ಮಹರ್ಷಿಗಳು ತಪಸ್ಸು ಮಾಡಿದ್ದರು ಅದಕ್ಕೆ ಮೆಚ್ಚಿದ ಶ್ರೀ ವಿಷ್ಣು ಇಲ್ಲಿ ಶ್ರೀರಂಗನಾಥ ಹೆಸರಿನಲ್ಲಿ ನೆಲೆಸಿದ್ದಾನೆ ಎಂದು ಪುರಾಣದಲ್ಲಿ ಉಲ್ಲೇಖವಾಗಿದೆ. ಗಂಗರ ದೊರೆ ತಿರುಮಲಯ್ಯನವರ ಕಾಲದಲ್ಲಿ (ಕ್ರಿ.ಶ.894 ರಲ್ಲಿ) ,ಮೂಲ ದೇವಸ್ಥಾನ ನಿರ್ಮಾಣವಾಯಿತು. ವಿಜಯನಗರಅರಸರ ಕಾಲದಲ್ಲಿ ನವರಂಗ, ಮುಖಮಂಟಪ ಹಾಗೂ ರಾಜ ಗೋಪುರಗಳು ನಿರ್ಮಾಣಗೊಂಡವು. ಹೊಯ್ಸಳರ ಮುಮ್ಮುಡಿ ಬಲ್ಲಾಳನ ಕಾಲದಲ್ಲಿ ಒಳಾವರಣದ ಕುಸುರಿ ಕೆತ್ತನೆಗಳುಳ್ಳ ಕಂಬಗಳ ಹಜಾರ ನಿರ್ಮಾಣವಾಯಿತು.ಪಾತಾಳಾಂಕಣದ ಮುಂದಿನ ಭಾಗವನ್ನು ಜನಾಬ್ ಹೈದರ್ ಅಲಿ ಮತ್ತು ಮಂಟಪಗಳನ್ನು ಮೈಸೂರು ಒಡೆಯರ್ ವಂಶ್ಥರು ನಿರ್ಮಿಸಿದರು ಎಂದು ಇತಿಹಾಸ ಹೇಳುತ್ತದೆ.

ಗರ್ಭಗುಡಿಯ ಸುತ್ತ ವಿಷ್ಣುವಿನ ದಶಾವತಾರ ವಿಗ್ರಹಗಳು, ರಾಮಾನುಜಾಚಾರ್ಯರು, ವೇದಾಂತ ದೇಶಿಕರು, ಜೀಯರ್ ಮತ್ತು ಆಳ್ವಾರ್ ಗಳ ಗುಡಿಗಳಿವೆ. ತಲೆಗೆ ಕೈಕೊಟ್ಟು ಪವಡಿಸಿರುವ ಶ್ರೀರಂಗನ ಪದತಲದಲ್ಲಿ ಕಾವೇರಿ ಮಾತೆ ಹಾಗೂ ಎಡ ಬದಿಯಲ್ಲಿ “ಶ್ರೀರಂಗನಾಯಕಿ” ಅಮ್ಮನ ಗುಡಿ ಇದೆ. ಹೊರ ಪ್ರಾಕಾರದಲ್ಲಿ ಪ್ರಸನ್ನ ವೆಂಕಟರಮಸ್ವಾಮಿ ಹಾಗೂ ಹನುಮಂತನ ಗುಡಿಗಳಿವೆ. ಪ್ರತಿವರ್ಷಮಾಘ ಮಾಸದ ಸಪ್ತಮಿಯಂದು ಶ್ರೀರಂಗನಾಥ ಸ್ವಾಮಿಯ ದೊಡ್ಡ ರಥೋತ್ಸವ ಜರುಗುತ್ತದೆ. ಬ್ರಹ್ಮೋತ್ಸವದ ಅಂಗವಾಗಿ ಪ್ರಹ್ಲಾದೋತ್ಸವ, ಗಜೇಂದ್ರಮೋಕ್ಷ, ಸೂರ್ಯ ಮಂಡಲ ವಾಹನೋತ್ಸವ, ಮಂಟಪೋತ್ಸವ, ಹಾಗೂ ಶ್ರೀರಂಗನಾಥ ಮತ್ತು ಅಮ್ಮನವರ ರಥಾರೋಹಣ ಉತ್ಸವಗಳು ಜರುಗುತ್ತದೆ.

ಶ್ರೀರಂಗಪಟ್ಟಣದ ಶ್ರೀರಂಗನಾಥ ದೇವಸ್ಥಾನದಲ್ಲಿ ಉತ್ತರಾಯಣ ಪುಣ್ಯಕಾಲದಅಂಗವಾಗಿ ಸಂಕ್ರಾಂತಿಯ ದಿನದಂದು ವೈಕುಂಠ ದ್ವಾರವನ್ನು ತೆರೆಯಲಾಗುತ್ತದೆ. ಅಂದು ಸಂಜೆ ಲಕ್ಷದೀಪೋತ್ಸವ ನಡೆಯುತ್ತದೆ. ಮೂರನೇ ದಿನ ಶ್ರೀರಂಗನಾಥನ ಚಿಕ್ಕ ರಥೋತ್ಸವ ನಡೆಯುತ್ತದೆ. ವೈಶಾಖ ಶುದ್ದ ಸಪ್ತಮಿಯಂದು “ಶ್ರೀರಂಗ ಜಯಂತಿ” ಉತ್ಸವ ನಡೆಯುತ್ತದೆ.ಅಂದು ರಾತ್ರಿ ರಂಗನಾಥ ಸ್ವಾಮಿಗೆ ವಜ್ರ ಖಚಿತ “ಶ್ರೀ ರಂಗ ಮುಡಿ” ಕಿರೀಟವನ್ನು ತೊಡಿಸಿ ಪೂಜಿಸಲಾಗುತ್ತದೆ. ವರ್ಷದ ಉದ್ದಕ್ಕೂ ದೇವಸ್ಥಾನಲ್ಲಿ ನಿತ್ಯ ಪೂಜೆ, ಅಭೀಷೇಕಳು ನಡೆಯುತ್ತವೆ. ಶ್ರಾವಣ , ಕಾರ್ತೀಕ ಮಾಸದಲ್ಲಿ ವಿಶೇಷ ಪೂಜೆ ,ಉತ್ಸವಗಳು ನಡೆಯುತ್ತದೆ. ಶ್ರೀ ರಂಗ ಪಟ್ಟಣ ಐತಿಹಾಸಿಕ ಸ್ಥಳ, ಇಲ್ಲಿಗೆ ಬರುವ ಪ್ರವಾಸಿಗರು ಶ್ರೀರಂಗನಾಥನ ದೇವಸ್ಥಾನಕ್ಕೆ, ಬಂದು ಪೂಜೆ ಸಲ್ಲಿಸುತ್ತಾರೆ.

ದೇವಸ್ಥಾನ ಪ್ರತಿ ದಿನ ಬೆಳಗಿನ ಐದು ಗಂಟೆಗೆ ತೆರೆಯುತ್ತದೆ. ಸುಪ್ರಭಾತ ಸೇವೆಯ ನಂತರ ಬೆಳಿಗ್ಗೆ 07-30 ರಿಂದ ಮಧ್ಯಾಹ್ನ 01-30 ರವರೆಗೆ ಹಾಗೂ ಸಂಜೆ 04-00 ರಿಂದ ರಾತ್ರಿ 8-00 ರವರೆಗೆ ಭಕ್ತಾಧಿಗಳಿಗೆ ದೇವರ ದರ್ಶನಕ್ಕೆ ಅವಕಾಶವಿರುತ್ತದೆ. ಶ್ರೀರಂಗಪಟ್ಟಣ ಮಂಡ್ಯದಿಂದ 28 ಕಿ.ಮೀ ಮೈಸೂರಿನಿಂದ 16 ಕಿ.ಮೀ ಹಾಗೂ ಬೆಂಗಳೂರಿನಿಂದ 125 ಕಿ.ಮೀ ದೂರದಲ್ಲಿದೆ. ಸಾರಿಗೆ ಸಂಸ್ಥೆ ಬಸ್ ಹಾಗೂ ರೈಲು ವ್ಯವಸ್ಥೆ ಇದೆ. ಅರ್ಚನೆ, ಅಭೀಷೇಕ ಮಾಡಿಸುವವರು, ಮುಂಚಿತವಾಗಿ ದೇವಸ್ಥಾನದ ಕಾರ್ಯನಿರ್ವಾಹಕಅಧಿಕಾರಿಯನ್ನು ಸಂಪರ್ಕಿಸಬಹುದು. ದೇವಸ್ಥಾನದ ಪೊನ್ ನಂಬರ್,ಇಂತಿದೆ:-08236252273.

Tags
💜

ಭಕ್ತರ ಮನಮುಟ್ಟುವ ಅನುಭವಗಳು

```

❝ ಈ ತಾಣವನ್ನು ಓದಿದ ನಂತರ ನನ್ನ ಮನಸ್ಸಿಗೆ ಶಾಂತಿ ಮತ್ತು ಭರವಸೆ ದೊರೆಯಿತು.

🌸 ರಮೇಶ್, ಬೆಂಗಳೂರು

❝ ಇಲ್ಲಿರುವ ಆಧ್ಯಾತ್ಮಿಕ ವಿವರಣೆಗಳು ಸ್ಪಷ್ಟವಾಗಿಯೂ ಸರಳವಾಗಿಯೂ ಇವೆ.

🌼 ಸಿಂಧು, ಮೈಸೂರು

❝ ಈ ತಾಣವು ನಮ್ಮ ಮನೆಯಲ್ಲಿ ಒಂದು ಪವಿತ್ರ ಸ್ಥಳದಂತೆಯೇ ಆಗಿದೆ.

🌺 ಕೃಷ್ಣ, ಮಂಗಳೂರು

❝ ನನ್ನ ಆಧ್ಯಾತ್ಮಿಕ ಪ್ರಯಾಣದಲ್ಲಿ ಈ ತಾಣವು ಉತ್ತಮ ಮಾರ್ಗದರ್ಶಿಯಾಗಿದೆ. ಧನ್ಯವಾದಗಳು!

🌹 ಸುಗಂಧಿ, ಹುಬ್ಬಳ್ಳಿ

❝ ನಾನು ಹುಡುಕುತ್ತಿದ್ದ ಅನೇಕ ಮಾಹಿತಿಗಳನ್ನು ಇಲ್ಲಿ ಒಂದೇ ಸ್ಥಳದಲ್ಲಿ ಸುಂದರವಾಗಿ ಪಡೆದುಕೊಂಡೆ.

💠 ಲಲಿತಾ, ಬೆಳಗಾವಿ

❝ ಈ ತಾಣವು ಪ್ರತಿದಿನ ನನ್ನ ಮನಸ್ಸಿನಲ್ಲಿ ಒಂದು ಒಳ್ಳೆಯ ಆಲೋಚನೆಯನ್ನು ಮೂಡಿಸುತ್ತದೆ.

🌿 ಅರುಣ್, ಶಿವಮೊಗ್ಗ

❝ ಇಲ್ಲಿರುವ ವ್ರತ ವಿಧಾನಗಳು ಮತ್ತು ಪೂಜಾ ಮಾಹಿತಿಗಳು ಜೀವನಕ್ಕೆ ತುಂಬಾ ಉಪಯುಕ್ತವಾಗಿವೆ.

🌻 ಮೀನಾಕ್ಷಿ, ತುಮಕೂರು

❝ ದೈನಂದಿನ ರಾಶಿಫಲ ಮತ್ತು ಆಧ್ಯಾತ್ಮಿಕ ಸುದ್ದಿಗಳು ನನ್ನ ದಿನವನ್ನು ಶುಭವಾಗಿ ಆರಂಭಿಸಲು ಸಹಾಯ ಮಾಡುತ್ತವೆ.

☸️ ಕಾರ್ತಿಕ್, ಮೈಸೂರು

❝ ಶ್ಲೋಕಗಳ ಅರ್ಥಗಳನ್ನು ಇಷ್ಟು ಸರಳವಾಗಿ ನಾನು ಇದುವರೆಗೆ ಓದಿರಲಿಲ್ಲ!

🪔 ಗಾಯತ್ರಿ, ದಾವಣಗೆರೆ

❝ ಮಾನಸಿಕ ಒತ್ತಡದಲ್ಲಿದ್ದ ನನಗೆ ಇಲ್ಲಿರುವ ಲೇಖನಗಳು ತುಂಬಾ ಸಾಂತ್ವನ ನೀಡಿದವು.

🪷 ಸುಂದರ್, ಮಡಿಕೇರಿ

❝ ದೇವಾಲಯಗಳ ಸ್ಥಳ ಪುರಾಣಗಳ ಕುರಿತ ಮಾಹಿತಿಗಳು ತುಂಬಾ ಅದ್ಭುತವಾಗಿವೆ. ಕುಟುಂಬದೊಂದಿಗೆ ಓದುತ್ತೇವೆ.

🔔 ಪದ್ಮನಾಭ, ಉಡುಪಿ

❝ ಪ್ರತಿಯೊಂದು ಹಬ್ಬದ ಹಿಂದಿರುವ ನಿಜವಾದ ಕಾರಣಗಳನ್ನು ಇಲ್ಲಿಂದ ತಿಳಿದುಕೊಂಡೆ.

🌾 ರೇವತಿ, ಮೈಸೂರು
```