ಶ್ರೀವೈಷ್ಣವಂ ಎಂಬುದು ಶ್ರೀಮನ್ನಾರಾಯಣನೇ ಪರಮ ದೈವ ಎಂದು ಅವರ ಭಕ್ತರು ಅತ್ಯಂತ ನಂಬಿಕೆಯಿಂದ ಪೂಜಿಸುವ ಶಾಶ್ವತ ಮಾರ್ಗವಾಗಿರುವುದು.
ಶ್ರೀಮನ್ನಾರಾಯಣ? ಏಕೆ ಬೇರೆ ಯಾರು ಇರಬಾರದೆ ?
ಶ್ರೀವೈಷ್ಣವ ಪರಂಪರೆ ವೇದ,ವೇದಾಂತ,ಮತ್ತು ಆಳ್ವಾರ್ಗಳ ದಿವ್ಯ ಪ್ರಬಂಧಗಳನ್ನು ಆಧರಿಸಿರುವುದು. ಇವೆಲ್ಲವನ್ನು ‘ಪ್ರಮಾಣಂ’ ಎನ್ನುವರು – ಪ್ರಮಾಣಂ ಎಂದರೆ ಅಧಿಕೃತ ಮಾಹಿತಿಯ ಮೂಲ. ಇವೆಲ್ಲ ಪ್ರಮಾಣಗಳು ಶ್ರೀಮನ್ನಾರಾಯಣ ಎಲ್ಲಾ ಕಾರಣಗಳಿಗೆ ಕಾರಣ ಎಂದು ಸರ್ವಾನುಮತದಿಂದ ವಿವರಿಸುವುದು. ನಾವು ಸರ್ವೋಚ್ಚ ಕಾರಣವನ್ನು ಪೂಜಿಸಬೇಕು. ಆ ಸರ್ವೋಚ್ಚ ಕಾರಣವನ್ನು ಶ್ರೀಮನ್ನಾರಾಯಣ ಎಂದು ವಿವರಿಸಲಾಗಿದೆ. ಅದರಿಂದಲೇ ಶ್ರೀವೈಷ್ಣವ ಪೂರ್ತಿಯಾಗಿ ಶ್ರೀಮನ್ನಾರಾಯಣನನ್ನು ಕೇಂದ್ರೀಕರಿಸಲಾಗಿದೆ.
ಶ್ರೀವೈಶ್ಣವ ಅನುಯಾಯಿಗಳಾದ ನಾವು ಏನು ಮಾಡಬೇಕು?
ನಾವು ನಿತ್ಯ ನಿಯಮಿತವಾಗಿ ಪೆರುಮಾಳ್,ತಾಯಾರ್, ಆಳ್ವಾರ್, ಆಚಾರ್ಯರು ಇತ್ಯಾದಿಯವರನ್ನು ಪೂಜಿಸುತ್ತೇವೆ.
ಶ್ರೀಮನ್ನಾರಾಯಣನೇ ಪರಮ ದೈವ ಅಂದಮೇಲೆ ಮತ್ತೆ ಏಕೆ ತಾಯಾರ್, ಆಳ್ವಾರ್, ಆಚಾರ್ಯರು ಇತ್ಯಾದಿ ?
ತಾಯಾರ್ ಪೆರುಮಾಳಿನ ದಿವ್ಯ ಪತ್ನಿ . ಹಾಗಾಗಿ, ಪೆರುಮಾಳ್ ನಮ್ಮ ತಂದೆ ಮತ್ತು ತಾಯಾರ್ ನಮ್ಮ ತಾಯಿ. ಅವರನ್ನು ನಾವು ಒಟ್ಟಾಗಿ ಪೂಜಿಸಬೇಕು. ಆಗಾಗ್ಗೆ, ನಿಮ್ಮ ತಾಯಿ ಮತ್ತು ತಂದೆಗೆ ನಮಸ್ಕರಿಸುತ್ತೀರಿ ಅಲ್ಲವೇ – ಹಾಗೆಯೇ , ನಾವು ಪೆರುಮಾಳನ್ನು ಮತ್ತು ತಾಯಾರನ್ನು ಒಟ್ಟಿಗೆ ಪೂಜಿಸಬೇಕು. ಆಳ್ವಾರ್ ಅವರು ಮತ್ತು ಆಚಾರ್ಯರು ಶ್ರೀಮನ್ನಾರಾಯಣನ ಪರಮ ಭಕ್ತರು. ಅವರಿಗೆ ಶ್ರೀಮನ್ನಾರಾಯಣನ ಬಳಿ ಅತ್ಯಂತ ಭಕ್ತಿ. ಅವರೇ ಪೆರುಮಾಳ್ ಮತ್ತು ತಾಯಾರ್ ನ ವೈಭವವನ್ನು ಸ್ಪಷ್ಟವಾಗಿ ತಿಳಿಸಿದವರು- ಅದರಿಂದ ಅವರನ್ನು ಪೂಜಿಸುತ್ತೇವೆ.
ನಾವು ಶ್ರೀವೈಷ್ಣವರು , ಎಲ್ಲರನ್ನೂ ಪೆರುಮಾಳ್ ಮತ್ತು ತಾಯಾರ್ ಅವರ ಮಕ್ಕಳೆಂದು ಭಾವಿಸುತ್ತೇವೆ. ಅದರಿಂದ ಎಲ್ಲರ ಕ್ಷೇಮಕಾಗಿ ಪ್ರಾರ್ಥಿಸುತ್ತೇವೆ . ಶ್ರೀಮನ್ನಾರಾಯಣನ ಸೇವೆಗಾಗಿ ಇತರರಿಗೆ ಸಹಾಯ ಮಾಡುತ್ತೇವೆ.
ಹೇಗೆ ಮಾಡುವುದು?
ನಾವು ಯಾರನ್ನಾದರೂ ಯಾವಾಗಲಾದರೂ ಭೇಟಿಯಾದಾಗ ಪೆರುಮಾಳ್, ತಾಯಾರ್, ಆಳ್ವಾರ್, ಆಚಾರ್ಯರ ಬಗ್ಗೆ ಮಾತ್ರ ಚರ್ಚಿಸುತ್ತೇವೆ. ಪೆರುಮಾಳ್, ತಾಯಾರ್, ಆಳ್ವಾರ್, ಆಚಾರ್ಯರ ಶ್ರೇಷ್ಟತೆಯನ್ನು ತಿಳಿದು ಅವರಿಗೂ ಭಕ್ತಿ ಅಭವೃದ್ಧಿಯಾಗುತ್ತದೆ . ಅದು ಎಲ್ಲರಿಗೂ ಉಪಯೋಗಕಾರಿಯಾಗಿರುತ್ತದೆ.